ವಿಶ್ವ ಪ್ರೌಡ ಶಾಲೆಯಿಂದ ಸರ್ಕಾರಿ ಜಾಗ ಒತ್ತುವರಿ : ಪುರಸಭೆ ಅಧಿಕಾರಿಗಳ ವಿರುದ್ದ ಸಂಘಟನೆಗಳಿಂದ ಪ್ರತಿಭಟನೆಯ ಎಚ್ಚರಿಕೆ.
ವರದಿ : ಅರುಣ್ ಸಿಂಗ್ ರಾಜಪುತ್
ಬೇಲೂರು:
ಇತ್ತೀಚೆಗೆ ರಾಜ್ಯದಲ್ಲಿ ಭೂ ಮಾಫಿಯಾ ಹೆಚ್ಚಾಗಿ ಬಡವರು ನಿರ್ಗತಿಕರ ಬದುಕು ಮೂರಬಟ್ಟೆಯಾಗಿ ಬೀದಿಗೆ ಬಂದು ತಲುತ್ತಿದೆ.ಹಾಗೆಯೆ ಬೇಲೂರು ಪಟ್ಟಣದಲ್ಲಿಯೂ ನೂರಾರು ಎಕರೆಯಷ್ಟು ಪುರಸಭೆ ಜಾಗವನ್ನು ಕಬಳಿಕೆ ಮಾಡಿರುವ ಉದಾಹರಣೆ ಸಾಕಷ್ಟಿದೆ.
ಪಟ್ಟಣದ ಕೆಂಪೆಗೌಡ ರಸ್ತೆಯಲ್ಲಿರುವ ಪುರಸಭೆ ವ್ಯಾಪ್ತಿಗೆ ಬರುವ ಸರ್ಕಾರಿ ಜಾಗವನ್ನು ವಿಶ್ವ ಸಂಯುಕ್ತ ಪದವಿಪೂರ್ವ ಕಾಲೇಜು ಮಂಡಳಿ ಅಕ್ರಮವಾಗಿ ಕಬಳಿಸುವ ಯತ್ನ ಮಾಡಿದ್ದಾರೆ ಎಂದು ಸಾರ್ವಜನಿಕರು ಹಾಗೂ ವಿವಿಧ ಪರ ಸಂಘಟನೆಗಳು ಪುರಸಭೆ ಅಧಿಕಾರಿಗಳ ವಿರುದ್ದ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲ ದಶಕಗಳಿಂದ ಸರ್ಕಾರಿ ಜಾಗದಲ್ಲಿ ತಲೆ ಎತ್ತಿ ನಿಂತಿರುವ ವಿಶ್ವ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಸುಮಾರು 1 ಎಕರೆಯಷ್ಟು ಪುರಸಭೆಗೆ ಸೇರಿದ ಜಾಗವನ್ನು ಅಕ್ರಮವಾಗಿ ವತ್ತುವರಿ ಮಾಡಿದ್ದರೂ ಕೂಡ ಪುರಸಭೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ ಅಧಿಕಾರಿಗಳ ಪಾಲು ಜೋರಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಸ್ಥಳಿಯರು ಆರೋಪ ಮಾಡಿದ್ದಾರೆ.
ತಾಲ್ಲೂಕಿನಾದ್ಯಂತ ಕೆಲ ಶಾಲೆಗಳ ಜಾಗವನ್ನೆ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಶ್ರೀಮಂತರು ಗಳು ಒತ್ತುವರಿ ಮಾಡಿರುವ ಉದಾಹರಣೆಗಳು ಇವೆ.ಅದರೆ ಇಲ್ಲಿ ಸರ್ಕಾರಿ ಜಾಗವನ್ನೆ ವಿಶ್ವ ಪದವಿ ಪೂರ್ವ ಆಡಳಿತ ಮಂಡಳಿ ನುಂಗಲು ಮುಂದಾಗಿದೆ.
ಪಟ್ಟಣದಲ್ಲಿರುವ ಕೆಲ ವಾರ್ಡ್ ಗಳಲ್ಲಿರುವ ಪುರಸಭೆ ಕೆಲ ಪಾರ್ಕ್ ಗಳ ಜಾಗವನ್ನು ಆಕ್ರಮಿಸಿಕೊಂಡು ಕೆಲ ರಾಜಕಾರಣಿಗಳು ಸೇರಿದಂತೆ ಒತ್ತುವರಿ ಮಾಡಿದ್ದಾರೆ.ಆದರೂ ಪುರಸಭೆ ಅಧಿಕಾರಿಗಳು ಕೇಳಿಲ್ಲ.ಕೆಲ ಶಾಲಾ ಕಾಲೇಜುಗಳು ಕೂಡ ಒತ್ತುವರಿ ಮಾಡಿದ್ದರೂ ಕೇಳುತ್ತಿಲ್ಲ.ಆದರೆ ಜನಸಾಮಾನ್ಯರು ಒಂದು ಅಡಿ ಒತ್ತುವರಿ ಮಾಡಿದ್ದರೆ ಮಾತ್ರ ಪುರಸಭೆ ಅಧಿಕಾರಿಗಳು ತೆರವಿಗೆ ಮುಂದಾಗುತ್ತಾರೆ.ಕಳೆದ ಸುಮಾರು 900 ವರ್ಷಗಳ ಹಿಂದಿನ ಕಾಲದಿಂದಲೂ ಚನ್ನಕೇಶವ ದೇವಾಲಯದ ರಕ್ಷಣೆಗೆಂದು ಅಂದಿನ ರಾಜರುಗಳು ದೇವಾಲಯದ ಸುತ್ತಲೂ ಅಗಳು ನಿರ್ಮಾಣ ಮಾಡಿದ್ದು ಇತಿಹಾಸವಿದೆ.ದೇವಾಲಯದ ಸುತ್ತಲೂ ನೀರಿನ ಹೊಂಡಾ ನಿರ್ಮಿಸಿ ಅದರಲ್ಲಿ ಮೊಸಳೆಗಳನ್ನು ಬಿಟ್ಟು ಯಾವ ಶತ್ರು ಸೈನ್ಯವೂ ದೇವಾಲಯಕ್ಕೆ ನುಸುಳಿ ಬಾರದಂತೆ ಅಗಳು ನಿರ್ಮಾಣ ಮಾಡಿದ್ದರು ಎಂಬ ಮಾತು ಇದೆ.ಆದರೆ ವಿಶ್ವ ಸಂಯುಕ್ತ ಪದವಿ ಪೂರ್ವ ಕಾಲೇಜು ಇರುವ ಜಾಗದಲ್ಲಿಯೂ ಅಗಳು ನಿರ್ಮಿಸಿರುವುದು ಪ್ರತ್ಯಕ್ಷವಾಗಿ ಇದೆ.ಆದರೆ ಇತ್ತೀಚೆಗೆ ಶಾಲೆಯವರು ಅಗಳು ಮುಚ್ಚಿ ಕೇವಲ ಒಂದು ಸಣ್ಣನಿವೇಶನದ ಹೆಸರಿನಲ್ಲಿ ಶಾಲೆ ನಿರ್ಮಿಸಿ ಎಕರೆಗಟ್ಟಲೆ ಜಾಗವನ್ನು ಕಬಳಿಕೆ ಮಾಡಲು ಮುಂದಾಗಿದ್ದಾರೆ. ಎಂದು ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ. ಇತ್ತೀಚೆಗೆ ಚನ್ನಕೇಶವ ದೇವಾಲಯಕ್ಕೆ ಸೇರಿದ ಜಾಗವನ್ನೂ ಬಿಡದೆ ಕೆಲ ಶ್ರೀಮಂತರು ಒತ್ತುವರಿ ಮಾಡಿಕೊಂಡಿರುವುದು ಪುರಸಭೆ ಅಧಿಕಾರಿಗಳ ಗಮನದಲ್ಲಿಯೂ ಇದೆ.ಆದರೆ ಕುರುಡು ಕಾಂಚಾಣಕ್ಕೆ ಕಟ್ಟುಬಿದ್ದು ಕೇಳುವಂತಹ ದೈರ್ಯವೂ ಇಲ್ಲದಂತಾಗಿದೆ.
ಕೂಡಲೆ ವಿಶ್ವ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕೆ ಹಾಗೂ ಮಾನ್ಯತೆ ಪಡೆಯಲು ಸರ್ಕಾರಕ್ಕೆ ಅವರು ನೀಡಿರುವ ಜಾಗವೆಷ್ಟು.ಒತ್ತುವರಿ ಮಾಡಿರುವ ಜಾಗವೆಷ್ಟು ಎಂಬುದನ್ನು ಪರಿಶೀಲಿಸಿ ಉಳಿದ ಜಾಗವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಬೇಕು.ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕನ್ನಡಪರ ಸಂಘಟನೆಗಳು ಆಗ್ರಹ ಮಾಡಿದ್ದಾರೆ.

