ಸಕಲೇಶಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಉಮಾದೇವಿಯವರನ್ನು ಇಂದು ಲೋಕಾಯುಕ್ತ ಬಲೆಗೆ ಬೀಳಿಸಿದೆ.
ಉಮಾದೇವಿಯವರು ತನ್ನ ಇಲಾಖೆಯಲ್ಲಿ ಸರಕಾರಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಲಂಚಕ್ಕಾಗಿ ಪೀಡಿಸುತ್ತಿದ್ದರೆನ್ನಲಾಗಿದೆ.
ಇಂದು ಖಚಿತ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು ಅಲ್ಲಿಗೆ ದಾಳಿ ಮಾಡಿ ಸಾಕ್ಷಿ ಸಮೇತ ಬಂಧನ ಮಾಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಈ ಮಹಿಳೆ ತನ್ನ ಮನೆಯಲ್ಲ್ಲೇ ಜನರನ್ನು ಕರೆಸಿ ಹಣ ಪಡೆಯುತ್ತಿದ್ದಾರೆನ್ನಲಾಗಿದೆ.
ಜನರಲ್ಲಿ ಡಿಮ್ಯಾಂಡ್ ಸಂಸ್ಕೃತಿ ಹೊಂದಿದ್ದ ಇವರ ಮೇಲೆ ಲೋಕಾಯುಕ್ತ ದಾಳಿಗೆ ಜನ ಸಂತಸ ಪಟ್ಟಿದ್ದಾರೆ

