ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳ ಪರಿಶೀಲಿಸಿದ ವೇಳೆ ಸರ್ಕಲ್ ಇನ್ಸಪೆಕ್ಟರ್ ರೇವಣ್ಣರನ್ನು ಶಾಸಕರಾದ ಹುಲ್ಲಳ್ಳಿ ಸುರೇಶ್ ರವರು ತರಾಟೆ ತೆಗೆದುಕೊಂಡರು.
ಚನ್ನಕೇಶವ ದೇವಾಲಯ ವೀಕ್ಷಿಸಿದ ಶಾಸಕರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮೂಲ ಭೂತ ಸೌಕರ್ಯಗಳ ಬಗ್ಗೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಐತಿಹಾಸಿಕ 900 ವರ್ಷಗಳ ಇತಿಹಾಸವಿರುವ ಶ್ರೀ ಚನ್ನಕೇಶವನ ಜಾತ್ರಾ ಮಹೋತ್ಸವ ಮಾರ್ಚ್ 31 ಹಾಗೂ 01 ರಂದು ನಡೆಯುವ ರಥೋತ್ಸವ ಸಂದರ್ಭದಲ್ಲಿ ಯಾವುದೆ ಸಮಸ್ಯೆಯಾಗದಂತೆ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ಮಾಡಿದ್ದೇನೆ.
ಬಹುತೇಕ ಭಕ್ತಾಧಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಅಧಿಕಾರಿಗಳು ಮಾಡಿದ್ದಾರೆ.ಒಂದಿಷ್ಟು ಸಣ್ಣಪುಟ್ಟ ಕೆಲಸಗಳು ಭಾಕಿ ಇರುವಂತಹ ಕೆಲಸಗಳನ್ನು ಈಗಾಗಲೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಜಾತ್ರೋತ್ಸವ ಅದ್ದೂರಿಯಾಗಿ ಶಾಂತಿಯುತವಾಗಿ ನೆರವೇರಬೇಕು ಮೂಲಭೂತವಾಗಿ ಜಾತ್ರೆಗೆ ಬರುವಂತಹ ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ,ಉಚಿತ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ,ಉಚಿತ ಶೌಚಾಲಯ ವ್ಯವಸ್ಥೆಗಳನ್ನು ಮಾಡಲಾಗಿದೆ.ಸ್ನಾನದ ಕೊಠಡಿ ಸೇರಿದಂತೆ ವಾಹನಗಳನ್ನು ರಸ್ತೆ ಅಡ್ಡಾದಿಡ್ಡಿಯಾಗಿ ನಿಲ್ಲಿಸದಂತೆ ಅಲ್ಲಲ್ಲಿ ನಾಮಫಲಕಗಳನ್ನು ಹಾಕಲಾಗಿದೆ.ಹೆಚ್ಚಾಗಿ ಬಿಸಿಲು ಇರುವುದರಿಂದ ಆರೋಗ್ಯ ಇಲಾಖೆ ವತಿಯಿಂದ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ.ದೇವಸ್ಥಾನದ ಸುತ್ತ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಎರಡು ದಿನ ಮುಂಚಿತವಾಗಿಯೆ ದೇವಸ್ಥಾನದ ರಸ್ತೆ ಪ್ರವೇಶಕ್ಕೆ ಬ್ಯಾರಕೇಡ್ ಗಳನ್ನು ಹಾಕಿ ವಾಹನಗಳು ಬಾರದಂತೆ ಪೋಲೀಸರು ನಿರ್ಬಂದ ಹೇಳಿದ್ದಾರೆ.ಸ್ಥಳಿಯರು ಹಾಗೂ ದೇವಾಸ್ಥಾನದ ಸುತ್ತ ಮುತ್ತಲಿನ ಮನೆಯವರು ಹೇಗೆ ಮನೆಗೆ ತೆರಳುವುದು ಎಂಬ ದೂರು ಶಾಸಕರಿಗೆ ಹೇಳುತ್ತಿದ್ದಂತೆ,ಶಾಸಕ ಕೆಂಡಾಮಂಡಲವಾಗಿ, ಪೋಲೀಸರು ಜನರ ರಕ್ಷಕರಾಗಬೇಕು. ಜನರ ಬಳಿ ಪ್ರೀತಿಯಿಂದ ನಡೆದುಕೊಳ್ಳಬೇಕು.ಸಮಸ್ಯೆಯಾದಾಗ ಜನ ನಿನ್ನ ಹತ್ತಿರ ಬರುವುದಿಲ್ಲ.ಜನಪ್ರತಿನಿದಿಗಳ ಹತ್ತಿರ ಬರುತ್ತಾರೆ.ನಿನಗಿಷ್ಟ ಬಂದಹಾಗೆ ಸೂಟು ಬೂಟು ಹಾಕಿ ಕೊಂಡು ನಿಂತುಕೊಂಡ್ರೆ ಸಾಲದು.ಎಂದು ಶಾಸಕರು ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣನನ್ನು ತರಾಟೆ ತೆಗೆದುಕೊಂಡರು.
ಭಗವಂತನಿಗಿಂತ ಯಾರು ದೊಡ್ಡವರಲ್ಲ.ನಾವೆಲ್ಲ ಭಕ್ತರಾಗಿ ಕೆಲಸ ಮಾಡಬೇಕು.ಕಳೆದ ಭಾರಿ ರಥೋತ್ಸವ ಸಂದರ್ಭದಲ್ಲಿ ನನ್ನಿಂದ ಒಂದಿಷ್ಟು ತಪ್ಪು ನಡೆದಿತ್ತು.ಆದರೆ ನಾನು ಮಾಡಿದ್ದಲ್ಲ ಯಾರೋ ಹೇಳಿ ಮಾಡಿಸಿದ್ದು ಚನ್ನಕೇಶವ ಸ್ವಾಮಿಗೆ ನಾನು ಷಮೆಯಾಚಿಸುತ್ತೇನೆ ಎಂದು ಜಾತ್ರೋತ್ಸವ ಅದ್ದೂರಿಯಾಗಿ ನಡೆಯಲು ಸಾರ್ವಜನಿಕರು ಶಾಂತಿಯುತವಾಗಿ ಸಹಕರಿಸಬೇಕು ಎಂದು ಚನ್ನಕೇಶವನ ಜಾತ್ರಾ ಮಹೋತ್ಸವಕ್ಕೆ ಶುಭಾಶಯ ಕೋರಿದರು.
ತಹಸೀಲ್ದಾರ್ ಮಾತನಾಡಿ,ಏಪ್ರಿಲ್ 01 ರಿಂದ ಮೇ 15 2026 ರ ವರೆಗೆ ಜನಗಣತಿ ಪ್ರಕ್ರಿಯೆ ಆರಂಭಗೊಂಡಿದೆ.ಈ ಅವಧಿಯಲ್ಲಿ ಗಣತಿದಾರರು ಮನೆಗೆ ಬೇಟಿ ನೀಡಿ ನಿಮ್ಮ ವಿವರಗಳನ್ನು ಪರಿಶೀಲಿಸುತ್ತಾರೆ.ಅಥವಾ ನಿಮ್ಮ ಜನಗಣತಿ ವಿವಿರಗಳನ್ನು ಆನ್ಲೈನ್ ಮೂಲಕ ಮೊಬೈಲ್ ನಂಬರ್ ಮತ್ತು OTP ಬಳಸಿ ಲಾಗಿನ್ ಮಾಡಿ ಸುರಕ್ಷಿತವಾಗಿ ಜನಗಣತಿ ನೊಂದಣಿ ಮಾಡಬಹುದು ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷೆ ಉಷಾ ಸತೀಶ್, ಉಪವಿಭಾಗಾಧಿಕಾರಿ ಡಾ.ವಿ.ಮಂಜುನಾಥ್.ತಹಸೀಲ್ದಾರ್ ಶ್ರೀ ಧರ್ ಕಂಕಣವಾಡಿ,ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಶ್.ಮಾಜಿ ಪುರಸಭೆ ಅದ್ಯಕ್ಷ ಎ.ಆರ್.ಅಶೋಕ್.ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ.ಆರೋಗ್ಯಾಧಿಕಾರಿ ಡಾ.ವಿಜಯ್.ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ .ವಿದ್ಯುತ್ ಇಲಾಖೆ ಎಇಇ ಬಸವರಾಜು.ಸುಧಾಕರ್ ಸೇರಿದಂತೆ ಮತ್ತಿತರರು ಇದ್ದರು.
