ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ಬ್ಯಾಕರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡರ ಜಗಲಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ 135ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ರಾಜಶೇಖರ್ ಇವರು ಕಾರ್ಯಕ್ರಮದ ರೂಪರೇಷೆಗಳನ್ನು ತಿಳಿಸಿದರು. ಜೊತೆಗೆ ಅಂಬೇಡ್ಕರ್ ಅವರ ಪಾಲಿಸಿದ ವಿದ್ಯೆ, ಸ್ವಾಭಿಮಾನ, ಶೀಲದ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಕಿಯಾದ ಮಲ್ಲಿಗೆ ಯಮ್ಮ ಇವರು ಬಾಬಾ ಸಾಹೇಬ್ ಅಂಬೇಡ್ಕರ್ ಮಹಿಳೆಯರಿಗೆ ನೀಡಿದ ಹಕ್ಕು ಅಧಿಕಾರ ಮತದಾನದ ಹಾಗೂ ಸಾಂವಿಧಾನಿಕ ಮೌಲ್ಯ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಶ್ರೀ ಕುಶಲ್ ಉಪನ್ಯಾಸಕರು ಅಂಬೇಡ್ಕರ್ ಅವರ ಜೀವನ ಹಾಗೂ ಹೋರಾಟ ಜೊತೆಗೆ ಸಾಂಸ್ಕೃತಿಕ, ಹಾಗೂ ಸಂಸ್ಕಾರದ ಮೌಲ್ಯದೊಂದಿಗೆ ಬೆಳೆದ ಅಂಬೇಡ್ಕರ್ ಅವರ ಸುಧೀರ್ಘ ಜೀವನ ಒಂದು ಪರಿಪೂರ್ಣವಾದದ್ದು ಅವರ ನಡೆ ನುಡಿ ಪ್ರತಿಯೊಬ್ಬರಿಗೂ ಮಾದರಿಯಾದದ್ದು ಪ್ರತಿ ತಂದೆ ತಾಯಿಯರು ಮಕ್ಕಳನ್ನು ಆ ರೀತಿ ಬೆಳೆಸಬೇಕು. ಜಾತಿ ವ್ಯವಸ್ಥೆಯ ಸಮಾಜದೊಳಗೆ ಜಾತಿಯನ್ನು ತಿಳಿದುಕೊಂಡು ಬದುಕುವುದು ಬಹು ಮುಖ್ಯವಾದದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರಾದ ಶಾಂತರಾಜ್ ರವರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸೋಮಣ್ಣ ಅವರು ಉಪಸ್ಥಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮನೋಜ್ ಅವರ ನೇತೃತ್ವದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ನಡೆಸಲಾಯಿತು. ಕಲ್ಲನ್ ಕೋಡಿ ಬ್ಯಾಡರ ಜಗಲಿ ಕೆಳಹಟ್ಟಿ ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮದಲ್ಲಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮವನ್ನು ಶಶಾಂಕ್ ನಿರೂಪಣೆ ಮಾಡಿದರು. ಪ್ರಶಾಂತ್ ಸ್ವಾಗತ ಕೋರಿದರು ಈ ವೇಳೆಯಲ್ಲಿ ಊರಿನ ಯುವಕರಾದ ಕುಮಾರಸ್ವಾಮಿ, ಕುಮಾರ, ಗೋಪಾಲ, ಲಕ್ಷ್ಮಣ, ಕುಮಾರ ಚಂದ್ರ ಕಿರಣ್ ದರ್ಶನ್ ಅಪ್ಪು ದರ್ಶನ್ ಗುರುಮೂರ್ತಿ ದೀಪಕ್ ಸತೀಶ್ ಸುಜಿತ್, ಚಿರಂತ್, ಪ್ರೇಮ್ ಕುಮಾರ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


