Blog

ಸಕಲೇಶಪುರದ ಹಾನು ಬಾಳು ಚಿಕ್ಕಿಯಲ್ಲಿ ಮಕ್ಕಳಿಗಾಗಿ ಸ್ಪರ್ಧೆ

ಹಾನ್ ಬಾಳ್ ಚಿಕ್ಕಿ – ಲಿಟ್ಲ್ ಆರ್ಟಿಸ್ಟ್ ಮಕ್ಕಳ ಚಿತ್ರಕಲಾ ಸ್ಪರ್ಧೆ*

Hanbal Chikki – Little Artist Kids Drawing Contest.

ಸಕಲೇಶಪುರದ ಪ್ರಸಿದ್ಧ ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.  ಸ್ಪರ್ಧೆಯಲ್ಲಿ 2 ವಿಭಾಗಗಳಿದ್ದು, ಪ್ರತೀ ವಿಭಾಗದ 5 ಅತ್ಯುತ್ತಮ ಚಿತ್ರಗಳಿಗೆ ಅಂದರೆ ಒಟ್ಟು 10 ಅತ್ಯುತ್ತಮ ಚಿತ್ರಗಳಿಗೆ  ತಲಾ 2000 ರೂಪಾಯಿ ಬಹುಮಾನ, ನೀಡಲಾಗುವುದು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಗಿಫ್ಟ್ ಹ್ಯಾಂಪರ ಇದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಉತ್ತಮ ಅವಕಾಶವನ್ನು ಸದುಪಯೋಗಿಸಿಕೊಳ್ಳಿ .

ಸ್ಪರ್ಧೆಯ ನಿಯಮಗಳು ಮತ್ತು ವಿವರಗಳು ಈ ಕೆಳಗಿನಂತಿವೆ:

(1) ಸ್ಪರ್ಧೆ ನಡೆಯುವ ಸ್ಥಳ:
ಹಾನುಬಾಳು ಚಿಕ್ಕಿ ಫ್ಯಾಕ್ಟರಿ,  ಗುಲಗಳಲೆ, ಸಕಲೇಶಪುರ.

(2) ಸ್ಪರ್ಧೆಯ ಸಮಯ:
ಮುಂಜಾನೆ 8 ರಿಂದ ಸಂಜೆ 8ರ ವರೆಗೆ. 8am – 8pm.

(3) ಸ್ಪರ್ಧೆಯ ದಿನಾಂಕ:
1 ಮೇ 2026 ರಿಂದ 17 ಮೇ 2026 ವರೆಗೆ (1/5/26 – 17/5/26). ಒಟ್ಟು 17 ದಿನಗಳು.

4) ಸ್ಪರ್ಧಾಳು ಮಕ್ಕಳುಗಳು ಖುದ್ದಾಗಿ ಸ್ಥಳದಲ್ಲಿ ಹಾಜರಿರಬೇಕು.

5) ಸ್ಪರ್ಧೆಯಲ್ಲಿ ಎರಡು ವಿಭಾಗಗಳಿರುತ್ತವೆ:

ಮೊದಲ ವಿಭಾಗ: Nursery ಯಿಂದ 3ನೇ ತರಗತಿಯವರೆಗೆ.

ಎರಡನೇ ವಿಭಾಗ: 4ನೇ ತರಗತಿಯಿಂದ 7ನೇ ತರಗತಿಯವರೆಗೆ. Theam: Save Nature.

6) ಪ್ರತೀ ವಿಭಾಗದಲ್ಲಿ ಅತ್ಯುತ್ತಮ 5 ಚಿತ್ರಗಳಿಗೆ ಸಮಾನ ಬಹುಮಾನ ನೀಡಲಾಗುವುದು.

7) ಸ್ಪರ್ಧಾಳುಗಳಿಗೆ ಕಾಗದ, ಕ್ರಯಾನ್ಸ್, ವಾಟರ್ ಪೇಂಟ್, ಬ್ರಷ್, ಕಲರ್ ಪೆನ್ಸಿಲ್, ಎರೇಸರ್ ಮತ್ತು ಶಾರ್ಪನರ್ ಅನ್ನು  ಸ್ಥಳದಲ್ಲಿಯೇ ನೀಡಲಾಗುವುದು.

8) ಒಬ್ಬ ಸ್ಪರ್ಧಿಯ ಒಂದು ಚಿತ್ರವನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.

9) ಫಲಿತಾಂಶವನ್ನು 18 ಮೇ 2026 ರಂದು ಪ್ರಕಟಿಸಲಾಗುವುದು.

10) ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.

Related posts

ಅರಸೀಕೆರೆ ಅಪ್ಪೇನ ಹಳ್ಳಿ ಸರಕಾರಿ ಶಾಲೆಗೆ ಕೊಠಡಿಯ ಸಮಸ್ಯೆ

Bimba Prakashana

ಎಸ್ ಎಸ್ ಎಲ್ ಸಿ – ಬೇಲೂರು ತಾಲೂಕುಗೆ ಶೇ. 95.59 ಫಲಿತಾಂಶ

Bimba Prakashana

Wanted

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More