Blog

ಯಸಳೂರುನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ನಿರ್ಧಾರ


ನಾಗೇಶ್ ಎಂ ಎಚ್ ಮಾಗೇರಿ.


ಸಕಲೇಶಪುರ ತಾಲ್ಲೂಕು
ಯಸಳೂರು ಹೋಬಳಿಯ   ಪೊಲೀಸ್ ಠಾಣೆ  ಎದುರು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣದ  ಗುದ್ದಲಿ ಪೂಜೆ ದಿನಾಂಕ- 28-06-2026ನೇ  ಭಾನುವಾರ ನೆರವೇರಲಿದೆ ಎಂದು
ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ  ಸಮಿತಿ  ಸಭೆಯಲ್ಲಿ ಅಧ್ಯಕ್ಷರಾದ  ಈರಯ್ಯ ದೊಡ್ಡನಹಳ್ಳಿ  ತಿಳಿಸಿದರು.

ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಮಾಡುವುದು ಬಹು ಕಾಲದ ಕನಸಾಗಿದ್ದು ,  ಈ  ಎರಡು ವರ್ಷಗಳ ಹಿಂದೆ ಯಸಳೂರು ಪೊಲೀಸ್ ಠಾಣೆ ಮುಂಭಾಗ  ಜಾಗವನ್ನು ಗುರುತಿಸಲ್ಪಟ್ಟಿತ್ತು.
ಕೆಲವು ಕಾರಣಗಳಿಂದ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ,
ಈಗ ಮತ್ತೆ ಹೊಸ ಸಮಿತಿ ರಚನೆಯಾಗಿ  ಎಲ್ಲಾ ಸಮುದಾಯದ ಮುಖಂಡರ ಮತ್ತು ಸಂಘ ಸಂಸ್ಥೆಯ ಸಹಕಾರದೊಂದಿಗೆ  ಡಾ||ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ  ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಎಲ್ಲಾ ಮುಖಂಡರು ಒಮ್ಮತದಿಂದ ತಿಳಿಸಿದ್ದಾರೆ.

ಎಲ್ಲಾ ಸಮುದಾಯದ ಮುಖಂಡರುಗಳು ಸಂಘ-ಸಂಸ್ಥೆಗಳು ಜನಪ್ರತಿನಿಧಿಗಳು ಭಾಗವಹಿಸ
ಬೇಕೆಂದು ಮನವಿ ಮಾಡಿದ್ದಾರೆ.

ಜೊತೆಗೆ
ಹಾಗೆಯೇ ಕಳೆದ ವರ್ಷ ಜುಲೈ ನಲ್ಲಿ  ಯಸಳೂರು ಅರಣ್ಯ ಅಧಿಕಾರಿಗಳಾಗಿದ್ದ ಕೃಷ್ಣರವರು ತೊಂತಲಾಪುರ ಗ್ರಾಮದ ಶೋಭರಾಜ್ ರವರ ಮೇಲೆ ಹಲ್ಲೆ ಜಾತಿ ನಿಂದನೆ ಮಾಡಿದ್ದಲ್ಲದೆ, ಅವರ ಮಡದಿ ಪ್ರಿಯಾ ಕೋಂ ಶೋಭರಾಜ್ ರವರ ಹೆಸರಿನಲ್ಲಿ ಸರ್ಕಾರ ಮಂಜೂರು ಮಾಡಿದ್ದ ಮನೆಯನ್ನು ಜೆ.ಸಿ.ಬಿ ಮೂಲಕ ಕೆಡವಿ ವಿಕೃತಿ ಮೆರೆದಿದ್ದ ಪ್ರಕರಣ ಕುರಿತು ಚರ್ಚಿಸಲಾಗಿ, ಶೋಭರಾಜ್ ರವರು ಈ ಸಂಬಂಧ ಅರಣ್ಯ ಅಧಿಕಾರಿ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿದ್ದರು ಮತ್ತು ದಲಿತ ಸಮುದಾಯದ ನಾಗರೀಕರು ಪ್ರತಿಭಟನೆ ಕೂಡ ಮಾಡಿದ್ದರು. ಹಾಗೂ ಮಾನ್ಯ ಶಾಸಕರು ವಿಧಾನಸಭೆಯಲ್ಲೂ ಕೂಡ ಚರ್ಚಿಸಿದ್ದರು. ಆದರೆ ಯಾವುದೇ ಮಾಹಿತಿ ಅಥವಾ ನೋಟಿಸ್ ಜಾರಿಗೊಳಿಸದೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಹಾಸನ ಡಿ.ಸಿ.ಆರ್ ವಿಭಾಗದಲ್ಲಿ ಪೋಲಿಸರು ಕೇಸ್ ಬಿ.ರಿಪೋರ್ಟ್ ಆಗಿದೆ ಎಂದು ಹೇಳುತ್ತಿದ್ದು ಈ ಸಂಬಂಧ ಸಮುದಾಯದ ವತಿಯಿಂದ ಕೇಸ್ ಪುನಃ ದಾಖಲಿಸಿ ಸೂಕ್ತ ನ್ಯಾಯ ಒದಗಿಸುವಂತೆ ಒತ್ತಾಯಿಸಲು ನಾವೆಲ್ಲರೂ ಸಹಕರಿಸುತ್ತೇವೆಂದು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ  ಗೌರವ ಅಧ್ಯಕ್ಷರಾದ  ನಿವೃತ್ತ ಬಿ ಇ ಓ ಕೊಮಾರಯ್ಯ.  ಮತ್ತು ಬಿ ಡಿ ಕುಮಾರಯ್ಯ  ಉಪಾಧ್ಯಕ್ಷ ರಾದ ಯೋಗೇಶ್, ಕಾರ್ಯದರ್ಶಿ ಮಂಜಯ್ಯ,ಸಹ ಕಾರ್ಯದರ್ಶಿ ಜಯಣ್ಣ ಹೆನ್ನಲಿ, ಖಜಾಂಚಿ ಕೃಷ್ಣಾ ಮತ್ತು
ನಿರ್ದೇಶಕರಾದ , ಸೋಮಶೇಖರ್ ಡಿ. ಡಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ‌ಮತ್ತು   ಸಮುದಾಯದ ಮುಖಂಡರು ಭಾಗವಹಿಸಿದ್ದರು.

Related posts

ಮಂಗಳವಾರ ಸಕಲೇಶಪುರದಲ್ಲಿ ವಿದ್ಯುತ್ ವ್ಯತ್ಯಯ

Bimba Prakashana

ಸಕಲೇಶಪುರ 5 ನೇ ವಾರ್ಡ್ ನಲ್ಲಿ ಚರಂಡಿಯಲ್ಲಿ ಬ್ಲಾಕ್ ಆದ ತ್ಯಾಜ್ಯ

Bimba Prakashana

ಪ್ರತಿಭಾ ಕಾರಂಜಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More