Blog

ಹೆತ್ತೂರು ಆರೋಗ್ಯ ಕೇಂದ್ರಕ್ಕೆ ತನಿಖಾಧಿಕಾರಿಗಳ ಭೇಟಿ

🔴ಹೆತ್ತೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ದುರಂತ ಅಂತ್ಯ ಕಂಡ ತಾಯಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಕಾಧಿಕಾರಿಗಳ ತಂಡ ಭೇಟಿ.


ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯಾದ ಮಂಜುಳಾ  ರವರ ನಿರ್ಲಕ್ಷ್ಯದಿಂದ  ತಾಯಿ ಮತ್ತು ಮಗು  ದುರಂತ ಅಂತ್ಯ ಕಂಡಿದ್ದರು, ಈ ವಿಚಾರವಾಗಿ ಹಾಸನ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.

ತಾಯಿ ಮತ್ತು ಮಗು ಸಾವಿನ ಪ್ರಕರಣದಲ್ಲಿ ಆರ್.ಸಿ‌.ಹೆಚ್ ವೈದ್ಯಾಧಿಕಾರಿಗಳಾದ ಡಾಕ್ಟರ್ ಫಾತಿಮಾ ಆರ್ ಇವರ ನೇತೃತ್ವದಲ್ಲಿ ವಿಶೇಷ ತನಿಕಾ ತಂಡವನ್ನು ರಚನೆ ಮಾಡಲಾಗಿತ್ತು.

ಈ ತನಿಖಾ ತಂಡ ಹೆತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿಕೊಟ್ಟು  ಕುಟುಂಬಸ್ಥರ ಹೇಳಿಕೆ,  ವೈದ್ಯರ ಹೇಳಿಕೆ, ಆಸ್ಪತ್ರೆ ಸಿಬ್ಬಂದಿಗಳ ಹೇಳಿಕೆ, ಆಸ್ಪತ್ರೆಯ ಸಿಸಿ ಕ್ಯಾಮೆರಾದ ದೃಶ್ಯಗಳು ಮತ್ತು
ಯೂತ್ ಲಯನ್ಸ್ ಫೆಡರೇಶನ್- ಸಕಲೇಶಪುರ ಪದಾಧಿಕಾರಿಗಳಾದ ನಾಗೇಶ್ ಎಂ.ಹೆಚ್ ಮಾಗೇರಿ ಮತ್ತು ಯೋಗೇಶ್ ಡಿ.ಆರ್ ದೊಡ್ಡಕಲ್ಲೂರು, ವಿಕ್ರಮ್ ಹೆತ್ತೂರು, ಇವರುಗಳ ಹೇಳಿಕೆಗಳನ್ನು  ಪಡೆಯಲಾಯಿತು.
ಈ ಸಂದರ್ಭದಲ್ಲಿ
ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಕಿಶೋರ್ ಕುಮಾರ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾಕ್ಟರ್ ಭಾರ್ಗವಿ ಗೌಡ,  ಶ್ರೀಮತಿ ಶ್ರುತಿ ಡಿ.ಎನ್.ಓ, ಶ್ರೀ ಮಂಜ ಶೆಟ್ಟಿ ಪ್ರಥಮ ದರ್ಜೆ ಸಹಾಯಕರು, ಚಂದ್ರಶೇಖರ್ ಪ್ರಥಮ ದರ್ಜೆ ಸಹಾಯಕರು,
ಹಿರಿಯ ಮುಖಂಡರಾದ ಕೊಮಾರಯ್ಯ ನಿವೃತ್ತ ಪಿಡಿಒ, ಅಣ್ಣಯ್ಯ ಹೆತ್ತೂರು, ರೇಣುಕಾ ಹೇರೂರು ಮತ್ತು
ಕೆಲವು ಪ್ರಮುಖರ ಸಮ್ಮುಖದಲ್ಲಿ  ತನಿಖೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಡಾ. ಫಾತಿಮಾ ಆರ್, ರವರು ಮಾತನಾಡಿ  ಈ ಘಟನೆಗೆ ಸಂಬಂಧಪಟ್ಟಂತೆ ಎಲ್ಲಾ ವೈದ್ಯಕೀಯ  ದಾಖಲೆಗಳನ್ನು ತೆಗೆದುಕೊಳ್ಳಲಾಗಿದೆ.ಜೊತೆಗೆ ಕುಟುಂಬಸ್ಥರ ಹಾಗೂ ಸಿಬ್ಬಂದಿಯ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ನೀಡಲಾಗುವುದು. ಈ ಘಟನೆಗೆ  ಸಂಬಂಧಪಟ್ಟವರನ್ನು ಕಾನೂನು ರೀತಿಯ ಕ್ರಮ ತೆಗೆದು ಕೊಂಡು ತಾಯಿ ಮತ್ತು ಮಗುವಿನ ಸಾವಿಗೆ  ನ್ಯಾಯ ಒದಗಿಸುತ್ತೇವೆಂದು ಭರವಸೆ ನೀಡಿದ್ದಾರೆ.

Related posts

ಬಸ್ – ಬೊಲೆರೋ ಮಧ್ಯೆ ಅಪಘಾತ – ಓರ್ವ ಮೃತ್ಯು

Bimba Prakashana

ಐ ಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

Bimba Prakashana

ದ್ರುವ ಸರ್ಜಾ ಚಲನಚಿತ್ರ ವೀಕ್ಷಣೆ ಮಾಡಲು 500 ಮಂದಿಗೆ ಅವಕಾಶ ಮಾಡಿ ಕೊಟ್ಟ ಸಾಗರ್ ಜಾನೇ ಕೆರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More