Blog

ಕಾಡ್ಳೂರು ಕೂಡಿಗೆಯಲ್ಲಿ ಕಾರು ಪಲ್ಟಿ

ಆಲೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡ್ಲೂರು ಕೂಡಿಗೆ ತಿರುವಿನಲ್ಲಿ ಸಂಭವಿಸಿದೆ.

ಕಾಡುಮನೆ ಗ್ರಾಮದ ನಿವಾಸಿಗಳಾದ ಶಾಂತಪ್ಪ ಹಾಗೂ ರಾಜು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳಾಗಿದ್ದಾರೆ.

ಇವರು ಕೆಲಸದ ನಿಮಿತ್ತ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಮಲ್ಲಾಪುರಕ್ಕೆ ಬಂದಿದ್ದರು ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಕಾಡ್ಲೂರು ಗ್ರಾಮದ ಕೂಡಿಗೆಯ ತಿರುವಿನಲ್ಲಿ ನಾಯಿ ಅಡ್ಡ ಬಂದಿದೆ ಆ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮೂರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

ಈ ಅಪಘಾತ ನಡೆದ ಸ್ಥಳದ ವಿಡಿಯೋ ಸ್ಥಳೀಯ ನಿವಾಸಿಯೊಬ್ಬರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಗೊಂಡ ಇಬ್ಬರು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

ಕ್ಯಾಮನ ಹಳ್ಳಿಯಲ್ಲಿ ಸ್ವಚ್ಛತೆ

Bimba Prakashana

ಚಂಗಡ ಹಳ್ಳಿಯಲ್ಲಿ ಜ್ಞಾನ ದೀಪ ವಾರ್ಷಿಕ ಸಭೆ

Bimba Prakashana

ವಿದ್ಯುತ್ ಸಮಸ್ಯೆ ಹುಣಸವಳ್ಳಿ ಗ್ರಾಮಸ್ಥರ ಆಕ್ರೋಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More