ಆಲೂರು: ಸತ್ ಚಿಂತನೆ, ಸತ್ ಕಾರ್ಯಗಳ ಮೂಲಕ ಭಗವಂತ ನೀಡಿರುವ ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖ ಸಂಸ್ಥಾನ ಹಿರೇಮಠದಲ್ಲಿ ಸರ್ವ ಸದ್ಭಕ್ತರ ಸರ್ವಾಭಿವೃದ್ಧಿಗೋಸ್ಕರವಾಗಿ ಅಪಮೃತ್ಯು ದೋಷ ಪರಿಹಾರಕ್ಕಾಗಿ, ಅನಾರೋಗ್ಯ ನಿವಾರಣೆಗಾಗಿ ಹಾಗೂ ಪ್ರದೇಶಾಭಿವೃದ್ಧಿಗಾಗಿ ಆಯೋಜಿಸಿದ್ದ ಮಹಾಮೃತ್ಯುಂಜಯ ಹೋಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೋಮ, ಹವನ ಮಾಡಿ, ತೊಂದರೆ ನಿವಾರಿಸಿಕೊಳ್ಳುವ ಕ್ರಿಯೆ ವೇದ, ಪುರಾಣ, ಇತಿಹಾಸ ಕಾಲದಿಂದಲೂ ಜಾರಿಯಲ್ಲಿದೆ. ಇದರಿಂದ ಮಾನವನನ್ನು ಕಾಡುವ ಅನೇಕಾನೇಕ ಕಷ್ಟಕಾರ್ಪಣ್ಯ, ರೋಗ ರುಜಿನ ಸೇರಿದಂತೆ ಹಲವು ಬಾಧೆ ನಿವಾರಿಸಿಕೊಳ್ಳಬಹುದು ಎಂಬುದು, ಹಿಂದೂ ಧರ್ಮದ ನಂಬಿಕೆ. ಹೋಮ- ಹವನಗಳನ್ನು ಮಾಡುವುರಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ, ಶಾಂತಿ ಸಿಕ್ಕಿ ಮಾನವ ಸಂತೋಷದಿಂದ, ಆರೋಗ್ಯದಿಂದ ಇರುತ್ತಾನೆ. ಪರಿಸರವೂ ಶುದ್ಧವಾಗಿರುತ್ತದೆ ಎಂಬುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ.
ಕಾರ್ಯಕ್ರಮದಲ್ಲಿ ರಾಮಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷರದ ಶ್ರೀ ಷ ಬ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳ ಅವರ ಸಂಕಲ್ಪದಂತೆ ಮಠದಲ್ಲಿ ನಿರಂತರವಾಗಿ ಹಲವು ಸತ್ಕಾರ್ಯಗಳು ನಡೆಯುತ್ತಿವೆ. ಜಗದ್ಗುರು ರೇಣುಕಾಚಾರ್ಯ ಹಾಗೂ ಬಾಳೆಹೊನ್ನೂರು ಶ್ರೀಗಳ ಮಾರ್ಗದರ್ಶನದಂತೆ ಭಕ್ತರಿಗೆ ಅಭಯ ನೀಡುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಮಠದ ಅಭಿವೃದ್ಧಿಗಾಗಿ ಹೋಮ, ಹವನ, ಪಾರಾಯಣ ಹಾಗೂ ವೇದ ಪಠಣದಂತಹ ಧರ್ಮ ಕಾರ್ಯಗಳನ್ನು ಹೆಚ್ಚಾಗಿ ನಡೆಸುತ್ತಿರುವುದು ಬಹಳ ಸಂತೋಷದಾಯಕ ವಿಚಾರವಾಗಿದೆ, ಈ ಭಾಗದ ಭಕ್ತರ ಸಹಕಾರದಿಂದ ಈ ಧರ್ಮ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ನಡೆಯುತ್ತಿರುವುದು ಮತ್ತಷ್ಟು ಆಶಾದಾಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸದ್ಭಕ್ತರಿಗೂ ಅನ್ನದಾಸೋಹ ವ್ಯವಸ್ಥೆಯನ್ನು ಶ್ರೀ ಮಠದ ವತಿಯಿಂದ ಕಲ್ಪಿಸಲಾಗಿತ್ತು,
ಕಾರ್ಯಕ್ರಮದಲ್ಲಿ ಬೇಲೂರು ಶಾಸಕ ಎಚ್ ಕೆ ಸುರೇಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರುದ್ರೇಗೌಡ, ತಾಲೂಕು ವೀರಶೈವ ಲಿಂಗಾಯತ ಸಂಘದ ಪ್ರಧಾನ ಕಾರ್ಯದರ್ಶಿ ಎಸ್, ಎಸ್ ಶಿವಮೂರ್ತಿ, ವಕೀಲ ಮಹೇಶ್, ದೇವರಾಜ್ ಶಾಸ್ತ್ರಿಗಳು, ಯತೀಶ್ ಶಾಸ್ತ್ರಿಗಳು, ವಿನಯ್ ಶೈವ ಮಲ್ನಾಡ್, ಮಡಬಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಪ್ರದೀಪ್,
ಕಾರ್ಜುವಳ್ಳಿ ಹಾಗು ಸುತ್ತಮುತ್ತಲಿನ ಭಕ್ತರು
ಪೋಟೋ ಕ್ಯಾಪ್ಶನ್: ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖ ಸಂಸ್ಥಾನ ಹಿರೇಮಠದಲ್ಲಿ ಸರ್ವ ಸದ್ಭಕ್ತರ ಸರ್ವಾಭಿವೃದ್ಧಿಗೋಸ್ಕರವಾಗಿ ಅಪಮೃತ್ಯು ದೋಷ ಪರಿಹಾರಕ್ಕಾಗಿ, ಅನಾರೋಗ್ಯ ನಿವಾರಣೆಗಾಗಿ ಹಾಗೂ ಪ್ರದೇಶಾಭಿವೃದ್ಧಿಗಾಗಿ ಆಯೋಜಿಸಿದ್ದ ಮಹಾಮೃತ್ಯುಂಜಯ ಹೋಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಮಠದ ಪೀಠಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
previous post
next post
