Blog

ವನಗೂರು ಕೂಡು ರಸ್ತೆಯಿಂದ ಸಕಲೇಶಪುರ ಕ್ಕೆ ನೂತನ ಬಸ್

ವನಗೂರು ಕೂಡುರಸ್ತೆಯಿಂದ ಸಕಲೇಶಪುರ ಕಡೆಗೆ  ಹೋಗುವ ನೂತನ ಬಸ್ ಮಾರ್ಗಕ್ಕೆ  ಚಾಲನೆ .:-

ಸಕಲೇಶಪುರ:-    ವನಗೂರು ಕೂಡುರಸ್ತೆಯಿಂದ   ಸಕಲೇಶಪುರ ಕಡೆಗೆ ಬೆಳಿಗ್ಗೆ 8. 15 ಗಂಟೆಗೆ ಕೆ. ಎಸ್. ಆರ್.ಟಿ.ಸಿ ಬಸ್ ಹೋದರೆ  10. 30 ಗಂಟೆ ತನಕ ಯಾವುದೆ ಬಸ್ ಸಕಲೇಶಪುರ ಕಡೆಗೆ ಹೋಗಲು ವ್ಯವಸ್ಥೆ ಇರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿತ್ತು..

2 ಗಂಟೆಗಳ ಅಂತರದಲ್ಲಿ ಒಂದು ಬಸ್ ವ್ಯವಸ್ಥೆ ಮಾಡಿಕೊಡುವಂತೆ ಕ.ರ.ವೇ ತಾಲ್ಲೂಕು ಘಟಕದವರು ಹಾಗೂ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದವರು ಶಾಸಕರಾದ ಸಿಮೆಂಟ್ ಮಂಜು ನವರ ಗಮನಕ್ಕೆ ತಂದು ಅವರ ಸಿಪಾರಸಿನ ಪತ್ರದೊಂದಿಗೆ ಸಕಲೇಶಪುರ ಕೆ.ಎಸ್.ಆರ್. ಟಿ. ಘಟಕ ವ್ಯವಸ್ಥಾಪಕರಿಗೆ  ಮನವಿ ಸಲ್ಲಿಸಿದರು.

ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸಕಲೇಶಪುರ ಕೆ.ಎಸ್.ಆರ್.ಟಿ. ಸಿ ಘಟಕ ವ್ಯವಸ್ಥಾಪಕರಾದ ಪುಟ್ಟಸ್ವಾಮಿ ಜಿಲ್ಲಾ ಸಂಚಾರ ಅಧಿಕಾರಿಗಳಾದ ಚನ್ನಬಸಪ್ಪ ಅವರ ಗಮನಕ್ಕೆ ತಂದು ಬಸ್  ಸೌಲಭ್ಯವನ್ನು ಮಾಡಿಕೊಟ್ಟಿದ್ದಾರೆ. ಇದರ ನೂತನ ಬಸ್ ಸಂಚಾರದ ಮಾರ್ಗಕ್ಕೆ  ಕೂಡರಸ್ತೆ, ಹೆತ್ತೂರು ವೃತ್ತ,ವಳಲಹಳ್ಳಿ ಕೂಡಿಗೆಯ ವೃತ್ತದಲ್ಲಿ ಸಾರ್ವಜನಿಕರು ಬಸ್ಸಿಗೆ ಮಾವಿನ ತೋರಣ,ಬಾಳೆ ಕಂಬವನ್ನು ಕಟ್ಟಿ ಪೂಜೆ ಮಾಡಿ ಸಿಹಿ ಹಂಚಿ ಚಾಲನೆ ನೀಡಿದರು.

ಈ ಬಸ್ಸು ಬೆಳಗ್ಗೆ 7.30 ಕ್ಕೆ ಸಕಲೇಶಪುರ ನಿಲ್ದಾಣ ಬಿಟ್ಟು ಕ್ಯಾನಹಳ್ಳಿ ಮಾರ್ಗವಾಗಿ ಬ್ಯಾಕರವಳ್ಳಿ, ಹೆತ್ತೂರು ಕೂಡರಸ್ತೆ  ತಲುಪಿ ಅಲ್ಲಿದ 9 ಗಂಟೆಗೆ ಅದೇ ಮಾರ್ಗವಾಗಿ ಸಕಲೇಶಪುರ ತಲುಪುತ್ತದೆ. ಇದರಿಂದ  ಕಾಲೇಜು ವಿದ್ಯಾರ್ಥಿಗಳು,ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ಹೊರಡುವ ರೋಗಿಗಳು, ತಮ್ಮ ದೈನಂದಿನ ಕೃಷಿ ಅಥವಾ ವ್ಯಾಪಾರ ಕಾರ್ಯಗಳಿಗಾಗಿ ಹೊರಡುವ ರೈತರು ಮತ್ತು ಉದ್ಯೋಗಸ್ಥರು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಅನುಕೂಲ ಆಗಿ,ಬಸ್ ಗಾಗಿ 2 ಗಂಟೆಗಳ ಕಾಲ ಕಾಯುತ್ತ ನಿಲ್ಲುವುದು ತಪ್ಪಿದಥಾಗಿದೆ. ಈ ಸಾರ್ವಜನಿಕರ ಅನುಕೂಲ ಮಾಡಿಕೊಟ್ಟ ಶಾಸಕರಾದ ಸಿಮೆಂಟ್ ಮಂಜು ಹಾಗೂ ಬೆಳೆಗಾರರ ಸಂಘದವರಿಗೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅವರಿಗೆ ಗ್ರಾಮಸ್ಥರು ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ. ಪಿ ಕೃಷ್ಣೇಗೌಡ, ಹೆತ್ತೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರವಿ ಕುಮಾರ್ ಹೆತ್ತೂರು, ವಳಲಹಳ್ಳಿ ಬೆಳೆಗಾರ ಸಂಘದ ಅಧ್ಯಕ್ಷರಾದ ದರ್ಶನ್, ಉಪಾಧ್ಯಕ್ಷರಾದ ರುದ್ರೇಶ್, ಖಜಾಂಚಿ ಹೂವಣ್ಣ ಗೌಡ, ಗೌರವಾಧ್ಯಕ್ಷರಾದ ರಮೇಶ್, ಕಾರ್ಯದರ್ಶಿಯಾದ ಅರುಣ್ ಗೌಡ, ಜಂಟಿ ಕಾರ್ಯದರ್ಶಿಯಾದ ಗಿರೀಶ್ ಚಿನ್ನಹಳ್ಳಿ ಹಾಗೂ ಅನಿಲ್ ಜಾತಹಳ್ಳಿ,ಕ.ರ.ವೇ ತಾಲ್ಲೂಕು ಅಧ್ಯಕ್ಷರಾದ ಗಗನ್ ಗೌಡ, ಕಾರ್ಯದರ್ಶಿ ಜೈ ಕುಮಾರ್, ರೈತ ಘಟಕದ ಅಧ್ಯಕ್ಷರಾದ ವಸಂತ್ ಬೊಮ್ಮನಕೆರೆ, ಹೆತ್ತೂರು ಹೋಬಳಿ ಕರ.ವೇ ಅಧ್ಯಕ್ಷರಾದ ದೀಪಕ್ ಗೌಡ,ಸೇರಿದಂತೆ ಗ್ರಾಮಸ್ಥರು,ಬೆಳೆಗಾರರು ಹಾಗೂ ಕ.ರ.ವೇ ಕಾರ್ಯಕರ್ತರು ಹಾಜರಿದ್ದರು.

Related posts

ಈ ಬಾಲಕ ಯಾರು ಗೊತ್ತೇ

Bimba Prakashana

ಬಸ್ ಸೌಲಭ್ಯ ಕಲ್ಪಿಸಿ

Bimba Prakashana

ಬೆಳ್ಳಾವರದಲ್ಲಿ ಕ್ರಿಕೆಟ್ ಪಂದ್ಯಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More