ವರದಿ :ನಾಗೇಶ್ ಎಂ ಎಚ್ ಮಾಗೇರಿ.
ನ್ಯಾಯಾಲಯ ಮತ್ತು ನ್ಯಾಯಾಧೀಶರಿಗೆ ಶೂ ಎಸೆದು ಅವಮಾನ ಮಾಡಿದ ವಕೀಲ ರಾಜ್ ಕಿಶೋರ್
*ವಿರುದ್ಧ ಸಕಲೇಶಪುರದಲ್ಲಿ ಪ್ರತಿಭಟನೆ*
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಮಾನ್ಯ ಗವಾಯಿಯವರಿಗೆ ವಕೀಲನೊಬ್ಬ
ಶೂ
ಎಸೆದು ಅವಮಾನ ಮಾಡಿರುವ ಘಟನೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ತೀವ್ರವಾಗಿ ಖಂಡಿಸುತ್ತದೆ
ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನ್ಯಾಯಲಯಕ್ಕೆ ಅವಮಾನ ಮಾಡಿದ ಜಾತಿವಾದಿ ವಕೀಲನನ್ನು ಕೊಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿಯು ಅಗ್ರಹಿಸುತಿದೆ.
ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಶ್ರೀ ಬಿ ಆರ್ ಗವಾಯಿಯವರು ಸಮಾಜಿಕ ಅಸಮಾನತೆಯನ್ನು ಎದುರಿಸಿ ಅರ್ಹತೆ ತಮ್ಮ ಸ್ವ ಸಾಮರ್ಥ್ಯದ ಮೂಲಕ ಉನ್ನತ ಸ್ಥಾನಕ್ಕೆ ಏರಿದವರು.
ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದರು ಸಹ ಜಾತಿಯತೆ ಮತ್ತು ಅಸಮಾನತೆಯು ಕೋಮುವಾದಿಗಳ ಮನಸ್ಸಿನಲ್ಲಿ ಇನ್ನೂ ಬೇರುರಿದೆ ಎನ್ನುವುದಕ್ಕೆ ಈ ಘಟನೆಯು ಸಾಕ್ಷಿಯಾಗಿದೆ.
ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಹಾಕಿ ಪರಸ್ಪರ ದ್ವೇಷ ಅಸಹಣೆ ಯನ್ನೂ
ಹುಟ್ಟು ಹಾಕಿರುವ ವಿಕೃತ ಮನಸ್ಸುಗಳು ಇನ್ನು ದೇಶದಲ್ಲಿ ವಿಜ್ರಂಬಿಸುತ್ತಿವೆ .
ರಾಕೇಶ್ ಕಿಶೋರ್ ನಂತರ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡು ಕೆಲವು ಪುಂಡರ ಜೊತೆ ಸೇರಿ ವಕೀಲನ ದುಷ್ಕೃತ್ಯವನ್ನು ಸಂಭ್ರಮಿಸುವುದನ್ನು ನಾವು ಕಾಣುತ್ತಿದ್ದೇವೆ ಇಂಥವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಹೆಚ್ಚಾಗಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಮುಖ್ಯ ನ್ಯಾಯಮೂರ್ತಿಗಳಾದ
ಶ್ರೀ ಬಿ ಆರ್ ಗವಾಯಿ ಯವರಿಗೆ ಮತ್ತು ನ್ಯಾಯಾಲಯಕ್ಕೆ ಅವಮಾನ ಮಾಡಿದ ವಕೀಲನ್ನನ್ನು
ಬಂಧಿಸಿ ಅವನ ಮೇಲೆ ಮತ್ತು ಅವನ ಬೆಂಬಲಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿಯು ಮಾನ್ಯ ಮುಖ್ಯಮಂತ್ರಿಗಳಿಗೆ ಸಕಲೇಶಪುರದ ಉಪಭಾಗಾಧಿಕಾರಿಗಳಾ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಲಕ್ಕಪ್ಪ ಗೊದ್ದು,
ರಾಧಾಕೃಷ್ಣ ವಕೀಲರು, ಕಲ್ಪನಾ ಕೀರ್ತಿ ವಕೀಲರು, ವಿರೇಶ್ ವಳಲ ಹಳ್ಳಿ, ನಂದಿನಿ ಬನವಾಸೆ,
ರಾಜು ಗೊರೂರು, ಕೋಮರಯ್ಯ ಹೆತ್ತೂರು, ಪ್ರಶಾಂತ್ ಕಲ್ಗಣೆ, ರಾಮಚಂದ್ರ ರಾವ್ ಬ್ಯಾಗಡಹಳ್ಳಿ, ರುದ್ರೇಶ್ ವಳಲ ಹಳ್ಳಿ,
ಶಾಂತರಾಜ್ ಹೆನ್ನಲಿ, ಹಿರಿಯ ಮುಖಂಡರುಗಳೂ ಯುವ ಮುಖಂಡರು ಈ ಪ್ರತಿಭಟನೆಯಲ್ಲಿ
ಭಾಗವಹಿಸಿದ್ದರು.
previous post
next post
