Blog

ಅಂಗನವಾಡಿ ಶಿಕ್ಷಕಿ ತುಳಸಿ ನಿವೃತ್ತಿ

ಸುಳ್ಳಕ್ಕಿ:  40 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಅಂಗನವಾಡಿ ಶಿಕ್ಷಕಿಗೆ ಗ್ರಾಮಸ್ಥರು ಮತ್ತು ಹಳೆ ವಿದ್ಯಾರ್ಥಿಗಳು ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಿದರು.

ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಶುಕ್ರವಾರ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿದ್ದರು. ಅಂಗನವಾಡಿ ಶಿಕ್ಷಕಿ ತುಳಸಿ ಅವರಿಗೆ ಗುರುಕಾಣಿಕೆ ನೀಡಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಅಂಗನವಾಡಿ ಶಿಕ್ಷಕಿ ತುಳಸಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಪ್ರೋತ್ಸಾಹಿಸುವ ಜೊತೆಗೆ ಸಮಾಜದಲ್ಲಿ ಉನ್ನತ ವ್ಯಕ್ತಿಯನ್ನಾಗಿ ಮಾಡಬೇಕು ಎಂದ ಅವರು, ಬೀಳ್ಕೊಡುಗೆ ನೀಡುತ್ತಿರುವ ಗ್ರಾಮಸ್ಥರು ಮತ್ತು ಹಳೆ ವಿದ್ಯಾರ್ಥಿಗಳುಗೆ ಧನ್ಯವಾದ ಅರ್ಪಿಸಿದರು.

ಅಂಗನವಾಡಿ ಶಿಕ್ಷಕಿ ತುಳಸಿ ಅವರು ದೊಡ್ಡ ಸತ್ತಿಗಾಲ ಗ್ರಾಮದವರಾಗಿದ್ದು, ಸುಳ್ಳಕ್ಕಿ ಗ್ರಾಮದಲ್ಲಿರುವ ಅಂಗನವಾಡಿಗೆ ನಿತ್ಯ 3 ಕಿ.ಮೀ ಕಾಲ್ನಡಿಗೆಯಲ್ಲಿಯೇ ಬರುತ್ತಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ್ದಾರೆ. ಅಕ್ಟೋಬರ್ 30ರಂದು ತುಳಸಿ ಅವರು ನಿವೃತ್ತಿಯಾಗಿದ್ದಾರೆ.

Related posts

ಸಕಲೇಶಪುರದಲ್ಲಿ ದರೋಡೆ ತಂಡ

Bimba Prakashana

ಸಕಲೇಶಪುರದಲ್ಲಿ ಅನಿಮಿಯ ತಡೆ ಕಾರ್ಯಕ್ರಮ

Bimba Prakashana

ಆಲೂರುನಲ್ಲಿ ರೈತ ಆತ್ಮಹತ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More