🔴ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ
🔴ನ್ಯಾಯಾಧೀಶರಿಂದ ಧ್ವಜಾರೋಹಣ
ಸಕಲೇಶಪುರ:- ಇಲ್ಲಿನ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ 76 ನೇ ಗಣರಾಜ್ಯೋತ್ಸವವನ್ನು
ಪೊಲೀಸ್ ಕವಾಯಿತು ಮತ್ತು ಪಥ ಸಂಚಲನದ ಮೂಲಕ ನ್ಯಾಯಾಧೀಶರಾದ ಜಯಪ್ರಕಾಶ್ ಮತ್ತು ಲಕ್ಷ್ಮೀನರಸಿಂಹರವರು ಧ್ವಜಾರೋಹಣವನ್ನು ನೆರವೇರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನ್ಯಾಯಾಲಯದ ಆವರಣದಲ್ಲಿ ಈ ಬಾರಿ ಬಹಳ ವಿಶೇಷವಾಗಿ ಗಣರಾಜ್ಯೋತ್ಸವವನ್ನು
ಆಚರಿಸಲಾಯಿತು.
ನಂತರ ವಕೀಲರ ಸಂಘದ ಸಭಾಂಗಣದಲ್ಲಿ ಮಹಿಳಾ ಮತ್ತು ಪುರುಷ ವಕೀಲರುಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಧ್ವಜಾರೋಹಣಕ್ಕೆ ಸಹಕರಿಸಿದ ಶಿಕ್ಷಕರೊಬ್ಬರನ್ನು ಸನ್ಮಾನಿಸಲಾಯಿತು. ವಕೀಲರಾದ ವೇಣುರವರು ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ನ್ಯಾಯಾಧೀಶರುಗಳು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ಹೇಳಿದರು. ಹಿರಿಯ ವಕೀಲರಾದ ಆರ್.ಎನ್.ಕೃಷ್ಣಮೂರ್ತಿಯವರು ತಮ್ಮ ನಿರೂಪಣೆಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಜಯಪ್ರಕಾಶ್ ರವರು, ಕಿರಿಯ ಶ್ರೇಣಿ ನ್ಯಾಯಾಧೀಶರಾದ ಲಕ್ಷ್ಮಿ ನರಸಿಂಹರವರು, ವಕೀಲರ ಸಂಘದ ಅಧ್ಯಕ್ಷರಾದ ಯಶವಂತ್ ಮತ್ತು ಕಾರ್ಯದರ್ಶಿಯಾದ ಶ್ರೀಮತಿ ವಾಣಿ ಹಾಗೂ ಎಲ್ಲಾ ಹಿರಿಯ ಮತ್ತು ಕಿರಿಯ ವಕೀಲರಗಳು, ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಭಾಗವಹಿಸಿದ್ದರು.
