Blog

ಸ್ವಯಂ ಟೈಮ್ಸ್ ವಾರ್ತಾ ವಾಹಿನಿಯನ್ನು ಹ್ಯಾಕ್ ಮಾಡಿದ ಸೈಬರ್ ಕಳ್ಳ

🔴ಸೈಬರ್ ವಂಚಕನಿಂದ ಕಾರ್ಕಳದ  ಸ್ವಯಂ ಟೈಮ್ಸ್  ಚಾನೆಲ್ ಹ್ಯಾಕ್

ಕಳೆದ 5 ವರ್ಷಗಳ ಹಿಂದೆ ಕಾರ್ಕಳದಲ್ಲಿ  ಆರಂಭಗೊಂಡು ಮನೆ ಮಾತಾಗಿದ್ದ  ಮಲ್ನಾಡ್ ಶಾಡೋ, ಮಾಧ್ಯಮ ಬಿಂಬ ಬಳಗದ ಸ್ವಯಂ ಟೈಮ್ಸ್  ಚಾನೆಲ್ ನ್ನು ಸೈಬರ್ ವಂಚಕ ಮೇ 20ರ ರಾತ್ರಿ ಹ್ಯಾಕ್ ಮಾಡಿರುವ ಘಟನೆ ವರದಿಯಾಗಿದೆ.

ಹ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಯೂ ಟ್ಯೂಬ್ ನಿಂದ ಸಕಾಲದಲ್ಲಿ ಬಂದ ನೋಟಿಫಿಕೇಶನ್ ನಿಂದ ಚಾನೆಲ್ ನ್ನೇ ಹಾಳು ಮಾಡುವ ನಿಟ್ಟಿನಲ್ಲಿ ಆಗುತ್ತಿದ್ದ ದೊಡ್ಡ  ಅನಾಹುತ ಒಂದು ತಪ್ಪಿದಂತಾಗಿದೆ.

🔴ಘಟನೆಯ ವಿವರ

—————–

  ಕಾರ್ಕಳದ ಸ್ವಯಂ ಟೈಮ್ ತನ್ನದೇ ಆದ ವಿಶಿಷ್ಟ, ವೈವಿಧ್ಯಮಯ, ಬದ್ಧತೆಯ ವರದಿಯೊಂದಿಗೆ ಎಲ್ಲರ ಮನೆಮಾತಾಗಿ  ರೂಪುಗೊಂಡಿತ್ತು. ಅತ್ಯಲ್ಪ ಅವಧಿಯಲ್ಲಿ ಸುಮಾರು 88 ಸಾವಿರ ಚಂದದಾರರನ್ನು ಹೊಂದಿದ್ದ ಸ್ವಯಂ  ಟೈಮ್ಸ್  ತನ್ನದೇ ಆದ ಕಂಟೆಂಟ್  ಮೂಲಕ ಚಂದಾದಾರರ ಮನದಾಳದಲ್ಲಿ ಉಳಿಯುವಂತೆ ಮಾಡಿದೆ.


ಆದರೆ ಮೇ 20 ತಡ ರಾತ್ರಿ ಸೈಬರ್  ವಂಚಕನೊಬ್ಬನಿಂದ ಸ್ವಯಂ ಟೈಮ್ಸ್ ಚಾನೆಲ್ ನ್ನು ಸಂಪೂರ್ಣವಾಗಿ ಹ್ಯಾಕ್ ಮಾಡಿ ಅದರ ಪಾಸ್ವರ್ಡ್, ಇಮೇಲ್ ಐಡಿ, ಫೋನ್ ನಂಬರ್ ಬದಲಾಯಿಸಿ ಅದರ ಸಂಪೂರ್ಣ ಸ್ವಾಯತ್ತತೆಯನ್ನು  ಪಡೆದುಕೊಂಡಿದ್ದ.

ಆದರೆ ವಿಶ್ವಾಸ,ನಿಸ್ವಾರ್ಥದ  ಸೇವೆಯ ದುಡಿದ  ಫಲವೆಂಬಂತೆ ಹ್ಯಾಕರ್ ಮಾಡಿದ ಕಾರ್ಯವನ್ನು ಸ್ವಯಂ ಟೈಮ್ಸ್ ಐ ಟಿ ಸೆಲ್ ವಿಫಲಗೊಳಿಸಿ ಸ್ವಯಂ ಟೈಮ್ಸ್ ಚಾನಲನ್ನು ಮತ್ತೆ ಹಿಂಪಡೆಯಲ್ಲಿ ಸ್ವಯಂ ಟೈಮ್ಸ್ ಬಳಗ ಯಶಸ್ವಿಯಾಗಿದೆ. ಇದರ ಮಾಹಿತಿಯನ್ನು ಸೈಬರ್ ಕ್ರೈಂ ಗೆ ನೀಡಲಾಗಿದೆ.

ಮೇ 21 ರಂದು ಬೆಳಿಗ್ಗೆ ಮತ್ತೊಮ್ಮೆ  ಹ್ಯಾಕ್ ಮಾಡಲು ಪ್ರಯತ್ನಿಸಿದ್ದು ಇದು ಮಾತ್ರ ಅಸಾಧ್ಯವಾಗಿಧೆ. ಇದರಿಂದ ಹ್ಯಾಕರ್ ನಿರಾಸೆ ಅನುಭವಿಸುವಂತಾಗಿದೆ.

ನೀವು ಯು ಟ್ಯೂಬ್ ನಲ್ಲಿ ನ್ಯೂಸ್ ಚಾನೆಲ್ ಅಥವಾ ಇನ್ಯಾವುದೇ ಡಿಜಿಟಲ್ ಚಾನೆಲ್ ಹೊಂದಿದ್ದರೆ ತಕ್ಷಣ ಈ ಬಗ್ಗೆ ಜಾಗರುಕರಾಗುವಂತೆ ಸ್ವಯಂ ಟೈಮ್ಸ್ ವಾರ್ತಾ ವಾಹಿನಿಯ ಪ್ರಕಟಣೆ ತಿಳಿಸಿದೆ

Related posts

ನಲ್ಲೂಲ್ಲಿ ಗ್ರಾಮದಲ್ಲಿ ಕೆಟ್ಟು ನಿಂತ ಲೈಟ್

Bimba Prakashana

ಹಾಸನ ಎಸ್ ಪಿಯಾಗಿ ಶುಭನ್ವಿತಾ

Bimba Prakashana

ಯಸಳೂರುನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ನಿರ್ಧಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More