Blog

ಕಾಫಿ ಬೆಳೆಗಾರ ಮಲ್ಲೇಶ್ ನಿಧನಕ್ಕೆ ಸಂತಾಪ

ಕಾಫಿ ಬೆಳೆಗಾರ ಮಲ್ಲೇಶ್ ನಿಧನ: ಬೆಳೆಗಾರರ ಸಂಘದಿಂದ ಸಂತಾಪ

ಹೆತ್ತೂರು: ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಮಾಜಿ ನಿರ್ದೇಶಕರಾಗಿದ್ದ ಹಾಗೂ ಹೆತ್ತೂರು ಹೋಬಳಿ ವಣಗೂರು ಗ್ರಾಮದ ಕಾಫಿ ಬೆಳೆಗಾರರಾದ ಮಲ್ಲೇಶ್ ಅವರು ನಿಧನರಾಗಿದ್ದಾರೆ.

ಮಲ್ಲೇಶ್ ಅವರ ನಿಧನಕ್ಕೆ ಹೆತ್ತೂರು ಹೋಬಳಿ ಬೆಳೆಗಾರರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕಾಫಿ ಬೆಳೆಗಾರರಾಗಿ ಹಾಗೂ ಸಂಘದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಬೆಳೆಗಾರರ ಹಿತಾಸಕ್ತಿಗಳ ಕುರಿತು ಸದಾ ಕಾಳಜಿ ಹೊಂದಿದ್ದರು ಎಂದು ಸಂಘದ ಪದಾಧಿಕಾರಿಗಳು ಸ್ಮರಿಸಿದ್ದಾರೆ.

ಅವರ ನಿಧನದಿಂದ ಬೆಳೆಗಾರರ ಸಮುದಾಯಕ್ಕೆ ಹಾಗೂ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರು, ಬಂಧು-ಬಳಗದವರಿಗೆ ದೇವರು ಕರುಣಿಸಲಿ ಎಂದು ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ವತಿಯಿಂದ ಪ್ರಾರ್ಥಿಸಲಾಗಿದೆ.

Related posts

ಎಸ್ ಎಸ್ ಎಲ್ ಸಿ – ಬೇಲೂರು ತಾಲೂಕುಗೆ ಶೇ. 95.59 ಫಲಿತಾಂಶ

Bimba Prakashana

ಅಪಘಾತ ಮಾಡಿ ಪರಾರಿ ಆದ ಲಾರಿ ಪತ್ತೆ ಆಗಲೇ ಇಲ್ಲ

Bimba Prakashana

ವೃತ್ತ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More